ಕನ್ನಡ

ನಮ್ಮ ಸಂಸ್ಥೆಯ ಬಗ್ಗೆ | ಲಭ್ಯವಿರುವ ಶೈಕ್ಷಣಿಕ ಕಾರ್ಯಕ್ರಮಗಳು | ಗ್ರಂಥಾಲಯ ಸೇವೆಗಳು/ಸವಲತ್ತುಗಳು | ವಿದ್ಯಾರ್ಥಿಗಳ ಅನುಕೂಲತೆಗಾಗಿ ವಿವಿಧ ಸಮಿತಿಗಳು | ಆಂತರಿಕ ಗುಣಮಟ್ಟ ಖಾತ್ರಿ ಕೋಶ | ಸಂಪರ್ಕ ವಿಳಾಸ

ಶ್ರೀ ಕ್ಷೇತ್ರ ಧರ್ಮಸ್ಥಳವು ಭಾರತೀಯ ಧರ್ಮ, ಕಲೆ, ಸಂಸ್ಕ್ರತಿ, ಸಾಹಿತ್ಯ, ಶಿಕ್ಷಣ ಹಾಗೂ ಸಾಮಾಜಿಕ ರಂಗಗಳಿಗೆ ಅನುಪಮ ಸೇವೆ ನೀಡುತ್ತಿದ್ದು, ಪ್ರಾಚೀನ ಚತುರ್ವಿಧ ದಾನಗಳ ಪರಂಪರೆಯೊಂದಿಗೆ ಆಧುನಿಕತೆಯ ಸಮನ್ವಯತೆಯನ್ನು ಸಾಧಿಸಿದೆ. ಕ್ಷೇತ್ರದ ಸಾಮಾಜಿಕ ಸೇವಾಕಾರ್ಯಗಳನ್ನು ವಿವಿಧ ಸಂಸ್ಥೆಗಳ ಮೂಲಕ ವ್ಯಾಪಕವಾಗಿ ಹಮ್ಮಿಕೊಳ್ಳಲಾಗಿದ್ದು ನಾಡಿನಾದ್ಯಂತ ಸಾವಿರಾರು ಜನರು ಇದರ ಫಲಾನುಭವಿಗಳಾಗಿದ್ದಾರೆ.

ಶಿಕ್ಷಣ ಕ್ಷೇತ್ರದಲ್ಲಿ ಎಸ್.ಡಿ.ಯಂ. ಸಂಸ್ಥೆಗಳು ವಿಶಿಷ್ಟ ಛಾಪನ್ನು ಮೂಡಿಸಿದ್ದು, ಧರ್ಮಾಧಿಕಾರಿ ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ನೇತ್ರತ್ವದಲ್ಲಿ ನಡೆಯುತ್ತಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಶನ್ ಸೊಸೈಟಿ(ರಿ). ವತಿಯಿಂದ ಆಧುನಿಕ ಶಿಕ್ಷಣದೊಂದಿಗೆ ಯೋಗ, ದ್ಯಾನ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ನೈತಿಕ ಶಿಕ್ಷಣ ಹಾಗೂ ಮೌಲ್ಯವರ್ಧಿತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಶಿಶು ವಿಹಾರದಿಂದ ಸ್ನಾತಕೋತ್ತರ ಪದವಿ ತನಕವೂ ಶ್ರೀ ಕ್ಷೇತ್ರದ ಶಿಕ್ಷಣ ಸಂಸ್ಥೆಗಳು ಹರಡಿಕೊಂಡಿವೆ.

ವಾಣಿಜ್ಯ, ವಿಜ್ಞಾನ, ಕಲಾ ಪದವಿ, ವೈದ್ಯಕೀಯ, ಕಾನೂನು, ಆಡಳಿತ ನಿರ್ವಹಣೆ, ಐಟಿಐ, ಇಂಜಿನಿಯರಿಂಗ್, ನರ್ಸಿಂಗ್, ಅರೆವೈದ್ಯಕೀಯ, ಶಿಕ್ಷಣ ಇತ್ಯಾದಿ ಕೋರ್ಸ್‍ಗಳನ್ನೊಳಗೊಂಡ 40ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳನ್ನು ಮೌಲ್ಯಯುತ ಶಿಕ್ಷಣದ ಸಂಕಲ್ಪದೊಂದಿಗೆ ರಾಜ್ಯದ್ಯಾಂತ ನಡೆಸಲಾಗುತ್ತಿದೆ.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯವು 1974ರಲ್ಲಿ ಸ್ಥಾಪನೆಗೊಂಡು ಶ್ರೇಷ್ಟ ಮಟ್ಟದ ಕಾನೂನು ಶಿಕ್ಷಣವನ್ನು ನೀಡುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಆರಂಭದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಸಂಯೋಜನೆಗೆ ಒಳಪಟ್ಟು,1980 ರಿಂದ ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಒಳಪಟ್ಟಿತ್ತು.2009ರಿಂದ ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದೊಂದಿಗೆ ಸಂಯೋಜನೆಗೊಂಡಿದೆ. ಆರಂಭದಲ್ಲಿ 3 ವರ್ಷದ ಕಾನೂನು ಪದವಿ ಕೋರ್ಸನ್ನು ನೀಡುತ್ತಿದ್ದು, ತದನಂತರ 5 ವರ್ಷದ ಕಾನೂನು ಪದವಿ ವಿದ್ಯಾಭ್ಯಾಸ ಆರಂಭಿಸಿದ ರಾಜ್ಯದ ಪ್ರಥಮ ಕಾಲೇಜು ಎಂದು ಗುರುತಿಸಲ್ಪಟ್ಟಿದೆ. ಪ್ರಸ್ತುತ ಮೂರು ವರ್ಷದ ಎಲ್.ಎಲ್.ಬಿ., ಐದು ವರ್ಷದ ಬಿ.ಎ. ಎಲ್.ಎಲ್.ಬಿ., ಐದು ವರ್ಷದ ಬಿಬಿಎ. ಎಲ್.ಎಲ್.ಬಿ., ಒಂದು ವರ್ಷದ ಎಲ್.ಎಲ್. ಎಂ.(ಸ್ನಾತಕೋತ್ತರ) ಪದವಿಯ ವಿದ್ಯಾಭ್ಯಾಸವನ್ನು ನೀಡಲಾಗುತ್ತಿದೆ. ಜೊತೆಯಲ್ಲಿ ಸ್ನಾತಕೋತ್ತರ ಡಿಪ್ಲೊಮ ಮತ್ತು ಇತರ ಅಲ್ಪಾವಧಿ ಕೋರ್ಸ್ ಗಳನ್ನು ಭೋಧಿಸಲಾಗುತ್ತದೆ. ಸಾಂಪ್ರದಾಯಿಕ ಪಠ್ಯಕ್ರಮದ ಜೊತೆಯಲ್ಲಿ ಪಠ್ಯೇತರ ಚಟುವಟಿಕೆಗಳಿಗೆ ಒತ್ತು ನೀಡಿ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಅವಕಾಶಗಳನ್ನು ಕಲ್ಪಿಸಲಾಗಿದೆ.
ರಾಷ್ಟ್ರೀಯ ಮಾನ್ಯತೆ ಹಾಗೂ ಮೌಲ್ಯಾಂಕನ ಪರಿಷತ್ (ನ್ಯಾಕ್) ನಿಂದ ‘ಎ” ಗ್ರೇಡ್ ಮಾನ್ಯತೆ ಪಡೆದಿದ್ದು, ಇದೀಗ ಮೂರನೇ ಹಂತದ ಮೌಲ್ಯಾಂಕನ ಹಾಗೂ ಮಾನ್ಯತೆಯ ಪ್ರಮಾಣಿಕರಣಕ್ಕೆ ಸಜ್ಜಾಗಿದೆ. ರಾಷ್ಟ್ರ ಮಟ್ಟದ ಶೈಕ್ಷಣಿಕ ಮೌಲ್ಯಮಾಪನಕ್ಕೆ ನಡೆಸಿದ ಹಲವು ಸಮೀಕ್ಷೆಗಳಲ್ಲಿ ಉತ್ಕ್ರ್ರಷ್ಟಗುಣಮಟ್ಟದ ಕಾನೂನು ಶಿಕ್ಷಣ ನೀಡುವ ಸಂಸ್ಥೆ ಎಂದು ಗುರುತಿಸಲ್ಪಟ್ಟಿದೆ.

 

Put Some Content Here!