ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನಲ್ಲಿ ೩೪ನೇ ವರ್ಷದ ಯಕ್ಷೋತ್ಸವ – ಅಂತರ್ಕಾಲೇಜು ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆ ನವೆಂಬರ್ ೨೧ರಂದು ಉದ್ಘಾಟನೆಗೊಂಡಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಶಾಲೆಟ್ ಪಿಂಟೋ ಅವರು, ಯಕ್ಷಗಾನವು ನವರಸಗಳನ್ನು ಹೊಂದಿರುವ ಕಲೆ ಮತ್ತು ತುಳುನಾಡಿನ ಸಂಸ್ಕೃತಿಯ ಅತಿ ವೈಶಿಷ್ಟ್ಯವನ್ನು ಪ್ರದರ್ಶಿಸುವುದು ಎಂದು ಹೇಳಿದರು. ಇನ್ನೊಬ್ಬ ಅಭ್ಯಾಗತರಾದ ಶ್ರೀ ಕೆ.ಎನ್. ಪ್ರವೀಣ್ ಕುಮಾರ್, ಹಿರಿಯ ನ್ಯಾಯವಾದಿಗಳು, ಕರ್ನಾಟಕ ಉಚ್ಚ ನ್ಯಾಯಾಲಯ, ಬೆಂಗಳೂರು ಮತ್ತು ಪೂರ್ವ ವಿದ್ಯಾರ್ಥಿ, ಎಸ್.ಡಿ.ಎಂ. ಕಾನೂನು ಮಹಾವಿದ್ಯಾಲಯ, ಮಂಗಳೂರು ಅವರು ಕಾಲೇಜು ದಿನಗಳಲ್ಲಿ ಯಕ್ಷಗಾನದ ಮಹತ್ವವನ್ನು ವಿವರಿಸಿದರು. ಅದೇ ರೀತಿಯಾಗಿ, ಮತ್ತೊಬ್ಬ ಅಭ್ಯಾಗತ ಶ್ರೀ ಪ್ರದೀಪ್ ನಾಯ್ಕ್ ಕೆ., ಹಿರಿಯ ನ್ಯಾಯವಾದಿಗಳು, ಕರ್ನಾಟಕ ಉಚ್ಚ ನ್ಯಾಯಾಲಯ, ಬೆಂಗಳೂರು ಮತ್ತು ಪೂರ್ವ ವಿದ್ಯಾರ್ಥಿ, ಎಸ್.ಡಿ.ಎಂ. ಕಾನೂನು ಮಹಾವಿದ್ಯಾಲಯ, ಮಂಗಳೂರು ಅವರು ತಮ್ಮ ವಿದ್ಯಾರ್ಥಿ ದಿನಗಳಲ್ಲಿ ಯಕ್ಷೋತ್ಸವವು ಹೇಗೆ ನಡೆಯುತ್ತಿತ್ತು ಎಂಬ ಅನುಭವಗಳನ್ನು ಹಂಚಿಕೊಂಡರು.
ಕಾಲೇಜಿನ ಪ್ರಾಂಶುಪಾಲ ಡಾ. ತಾರಾನಾಥ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಕಾಲೇಜಿನ ನಿವೃತ್ತ ಶಿಕ್ಷಕರಾದ ಹಾಗೂ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪ್ರೊ. ಉದಯ ಕುಮಾರ್ ಎಂ ಅವರನ್ನು ಸನ್ಮಾನಿಸಲಾಯಿತು. ಆಡಳಿತ ಮಂಡಳಿಯ ಸದಸ್ಯರಾದ ಪ್ರೊ. ಎ. ರಾಜೇಂದ್ರ ಶೆಟ್ಟಿ, ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ. ದೇವರಾಜ್ ಕೆ., ಸಂತ ಅಲೋಶಿಯಸ್ ಕಾನೂನು ಕಾಲೇಜಿನ ಮುಖ್ಯಸ್ಥ ಪ್ರೊ. ಉದಯ ಕೃಷ್ಣ ಬಿ., ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಶ್ರೀ ಹೆಚ್. ಸತೀಶ್ ಕುಮಾರ್, ಸಹ ಕಾರ್ಯದರ್ಶಿ ಶ್ರೀಮತಿ ಸಹನಾ ದೇವಿ, ಉಪಪ್ರಾಂಶುಪಾಲೆ ಡಾ. ಬಾಲಿಕಾ, ಪ್ರಾಂಶುಪಾಲೆ ಪ್ರೊ. ಅರುಣಾ ಪಿ. ಕಾಮತ್, ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಶ್ರೀ ಹೆಚ್.ವಿ. ರಾಘವೇಂದ್ರ ರಾವ್, ಕಾರ್ಯದರ್ಶಿಗಳು ಶ್ರೀಧರ ಹೊಸಮನೆ ಮತ್ತು ಪುಟ್ಟೂರಿನ ಹಿರಿಯ ವಕೀಲ ಮಹೇಶ್ ಕಜೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಯಕ್ಷೋತ್ಸವ ಸಂಚಾಲಕರಾದ ಪ್ರೊ. ಪುಷ್ಪರಾಜ್ ಕೆ. ಅವರನ್ನು ವಿದ್ಯಾರ್ಥಿ ಸಂಚಾಲಕ ಸುಹಾಸ್ ವಂದಿಸಿ ಸ್ವಾಗತಿಸಿದರು. ವಿದ್ಯಾರ್ಥಿನಿ ಸ್ವಾತಿ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.



